ಪತ್ನಿಯ ಕಾಟದಿಂದ ಬೇಸತ್ತು ಪತಿ ಆತ್ಮಹತ್ಯೆ
ತುಮಕೂರು: ಹೆಂಡತಿ ಕಾಟದಿಂದ ಬೇಸತ್ತು ಎಂಜಿನಿಯರ್ ಒಬ್ಬರು ಅಣ್ಣನಿಗೆ ಆಡಿಯೋ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ಮೃತನನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರು ಮೆಟ್ರೊದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು.
ಕಳೆದ 9 ವರ್ಷಗಳ ಹಿಂದೆ ಮಂಜುನಾಥ್ ತುರುವೆಕೆರೆ ಮೂಲದ ಪ್ರಿಯಾಂಕಾ ಯಾನೆ ಪವಿತ್ರಾಳನ್ನ ಮದುವೆಯಾಗಿದ್ದರು. ಮದುವೆ ನಂತರ ಮಂಜುನಾಥ್‍ಗೆ ಪತ್ನಿ ಪವಿತ್ರಾ ಮಾನಸಿಕ ಕಿರುಕುಳ ನೀಡಿದ್ದಳು. ಇದರಿಂದ ಮನನೊಂದು ಮಂಜುನಾಥ್ ಕೆಬಿ ಕ್ರಾಸ್ ನ ಕುದ್ರುಪಾಳ್ಯದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ




