March 16, 2026

ಕೊಳೆತ ಸ್ಥಿತಿಯಲ್ಲಿ ತಂದೆ, ಮಗನ ಶವ ಪತ್ತೆ

0
image_editor_output_image2075216149-1694755478697.jpg

ಕೋಲಾರ: ತಾಯಿ ತೀರಿಕೊಂಡ ಹಿನ್ನೆಲೆ ಮಗ ಮಾನಸಿಕವಾಗಿ ಕೊರಗಿದ್ದಲ್ಲದೆ ಹೃದಯಾಘಾತದಿಂದ ಪ್ರಾಣ ಬಿಟ್ಟರೆ ಅತ್ತ ವಯಸ್ಸಾದ ತಂದೆಗೆ ಆರೈಕೆ ಮಾಡುವವರಿಲ್ಲದೆ ನರಳಾಡಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಕೋಲಾರದಲ್ಲಿ ವರದಿಯಾಗಿದೆ.

ಕೊಳೆತ ಸ್ಥಿತಿಯಲ್ಲಿ ತಂದೆ ಹಾಗೂ ಮಗನ ಶವ ಪತ್ತೆಯಾಗಿದೆ. 12 ದಿನಗಳ ಹಿಂದೆಯೇ ಮಗನಿಗೆ ಹೃದಯಾಘಾತವಾಗಿ ಪ್ರಾಣ ಬಿಟ್ಟಿದ್ದು, ತಂದೆಗೆ ಪೋಷಣೆ ಮಾಡುವವರಿಲ್ಲದೆ ಅವರೂ ಮನೆಯಲ್ಲೇ ಉಸಿರು ಚೆಲ್ಲಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಂವಿ ನಗರದಲ್ಲಿ ಕಳೆದ 12 ದಿನಗಳ ಹಿಂದೆಯೇ ಇಬ್ಬರೂ ಮೃತಪಟ್ಟಿರುವ ಶಂಕೆ ಮೂಡಿದೆ. ಅಕ್ಕ ಪಕ್ಕದ ಮನೆಯವರಿಗೆ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!