December 16, 2025

ಲಿಬಿಯಾದ ಬಾರೀ ಚಂಡಮಾರುತ, ಪ್ರವಾಹ: 2,000 ಜನರು ಮೃತ್ಯು

0
image_editor_output_image-175716089-1694498982090.jpg

ಕೈರೋ: ಉತ್ತರ ಆಫ್ರಿಕಾದ ದೇಶದ ಪೂರ್ವ ಭಾಗಗಳಲ್ಲಿ ಡೇನಿಯಲ್ ಚಂಡಮಾರುತ ಹಾಗೂ ಪ್ರವಾಹದ ಅಬ್ಬರಕ್ಕೆ ಸುಮಾರು 2,000 ಜನರು ಮೃತಪಟ್ಟಿರುವುದಾಗಿ ಲಿಬಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಲ್-ಮಾಸ್ರ್ ಟೆಲಿವಿಷನ್ ಸ್ಟೇಷನ್‌ಗೆ ದೂರವಾಣಿ ಸಂದರ್ಶನದಲ್ಲಿ, ಪ್ರಧಾನ ಮಂತ್ರಿ ಒಸಾಮಾ ಹಮದ್ ಅವರು ಪೂರ್ವ ನಗರವಾದ ಡರ್ನಾದಲ್ಲಿ 2,000 ಜನರು ಚಂದ್ರಮರುತ ಹೊಡೆತಕ್ಕೆ ಮೃತಪಟ್ಟಿರುವುದಾಗಿ ಹಾಗೂ ಸಾವಿರಾರು ಜನರು ಕಾಣೆಯಾಗಿರುವುದಾಗಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಪ್ರಧಾನಿ ಸೋಮವಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದರು ಮತ್ತು ದೇಶಾದ್ಯಂತ ಧ್ವಜಗಳನ್ನು ಅರ್ಧಮಟ್ಟಕ್ಕೆ ಹಾರಿಸಲು ಆದೇಶಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!