February 3, 2026

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ KSRTC ಬಸ್

0
image_editor_output_image374479061-1694496774662.jpg

ಸವಣೂರು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ ಆರ್ ಟಿಸಿ ಬಸ್ ಒಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಘಟನೆ ಪುತ್ತೂರಿನ ಸವಣೂರಿನ ಸರ್ವೆಯಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಪುತ್ತೂರಿನಿಂದ ಸವಣೂರು ಮೂಲಕ ಪಂಜ ಕಡೆಗೆ ಹೋಗುತ್ತಿದ್ದ ಬಸ್‌ ಸರ್ವೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ ಬಿಡಲೆಂದು ಬದಿಗೆ ಸರಿದಾಗ ಬದಿಯ ಮಣ್ಣು ಮೃದುವಾಗಿದ್ದ ಕಾರಣ ಚರಂಡಿಗೆ ಬಸ್ಸು ವಾಲಿ ನಿಂತಿದೆ.

ಇಲ್ಲಿ ಜಲಜೀವನ್‌ ಯೋಜನೆಯಡಿ ಮಣ್ಣು ಅಗೆದು ರಸ್ತೆ ಬದಿ ಪೈಪ್‌ ಅಳವಡಿಸಲಾಗಿತ್ತು. ಮಳೆ ಬಂದ ಕಾರಣ ಆ ಮಣ್ಣು ಮೆದುವಾಗಿತ್ತು.ಹಾಗಾಗಿ ಈ ಅವಘಡ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!