February 3, 2026

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ವಿಟ್ಲ ಸೆನ್ಸಾಯಿ ಮಾಧವ ಅಳಿಕೆ ರವರ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0
IMG-20230911-WA0064.jpg

ಸೆಪ್ಟೆಂಬರ್ 9ರಂದು ದ.ಕ.ಜಿ.ಪ. ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ‌ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ‌ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ ಸೆನ್ಸಾಯಿ ಮಾಧವ ಅಳಿಕೆ ರವರ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ, ವಿಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತ್ರಿಷಾ ಮತ್ತು ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ‌ ಶಾಲೆಯ ತೇಜಸ್ ಬಿ ಪ್ರಥಮ‌ ಸ್ಥಾನ ಪಡೆದು ರಾಜ್ಯ ಮಟ್ಟಕೆ ಆಯ್ಕೆಯಾಗಿರುತ್ತಾರೆ.

ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ‌ ಶಾಲೆಯ ರಿಶೋನ್ ಲಸ್ರಾದೊ, ಸಂತ ಥಾಮಸ್ ಆಲಂಗಾರು ಶಾಲೆಯ ಮನ್ಮಿತ್, ಸಂಥೋಮ್ ವಿದ್ಯಾ ನಿಕೇತನ ಕಡಬ ಶಾಲೆಯ ಅನ್ವಿತ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಪ್ತಿ ,
ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆ ಬೆಳುವಾಯಿಯ ತನ್ವಿ, ಕವನ, ಕಾವ್ಯ,
ಸಂತ ಇಗ್ನೇಷಿಯಸ್ ಪಾಲಡ್ಕ ಶಾಲೆಯ ಶರಣ್, ರೆಯೋನ್, ರಿಹಾನ್,
ಆಳ್ವಾಸ್‌ ಮೂಡಬಿದ್ರೆ ಶಾಲೆಯ ಆರ್ಯಾನ್ ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ.

ವಿಧ್ಯಾರ್ಥಿಗಳು ಸೆನ್ಸಾಯಿ‌‌ ಮಾಧವ ಅಳಿಕೆ ಅವರ ಮಾರ್ಗದರ್ಶನದಲ್ಲಿ ಮತ್ತು ದಿಲೀಪ್, ರೋಹಿತ್ S.N, ನಿವೇದಿತ, ನಿಖಿಲ್ K T, ರೋಶಿನಿ, ದಕ್ಷತ್ ಗೌಡ ಇವರಿಂದ ತರಬೇತಿಯನ್ನು ಪಡೆದಿದ್ದಾರೆ.
ಕರಾಟೆಗೆ ಸೇರಲಿಚ್ಚಿಸುವ ಆಸಕ್ತರು ಸಂಪರ್ಕಿಸಿ
ಸೆನ್ಸಾಯಿ ಮಾಧವ ಅಳಿಕೆ: 9482519518

Leave a Reply

Your email address will not be published. Required fields are marked *

You may have missed

error: Content is protected !!