March 22, 2026

ಮಂಗಳೂರು: ಕೋಟ್ಯಾಂತರ ರೂ. ಬೆಲೆಬಾಳುವ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನ: ಮೂವರು ಸಿಸಿಬಿ ಪೊಲೀಸರ ವಶಕ್ಕೆ

0
IMG-20230911-WA0063.jpg

ಮಂಗಳೂರು: ಪಣಂಬೂರು ಬೀಚ್ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯ ಜೀವಿ ಉತ್ಪನ್ನವಾದ ಅಂಬರ್ ಗ್ರೀಸ್(ತಿಮಿಂಗಲ ವಾಂತಿ)ನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಮೂವರನ್ನು ಸಿ.ಸಿ.ಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಡುಪಿ ಮೂಲಕ ಸಾಲಿಗ್ರಾಮದ ನಿವಾಸಿಯಾದ ಜಯಕರ (29), ಶಿವಮೊಗ್ಗ ಜಿಲ್ಲೆಯ ಸಾಗರದ ಆದಿತ್ಯ(25) ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂ ಮೂಲದ ಲೋಹಿತ್ ಕುಮಾರ್ ಗುರಪ್ಪನವರ್(39) ಎಂದು ಗುರುತಿಸಲಾಗಿದೆ.

900 ಗ್ರಾಂ ತೂಕದ 90 ಲಕ್ಷ ಬೆಲೆಬಾಳುವ ಅಂಬರ್ ಗ್ರೀಸನ್ನು ಈ ಮೂವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ.

ಈ ದಾಳಿಯು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಯವರು ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!