3 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ಸಾವು
ಬೆಂಗಳೂರು: ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಕೃಷ್ಣವೇಣಿ (26) ಸಾವನ್ನಪ್ಪಿರುವ ನವವಿವಾಹಿತೆ. ಮೂರು ತಿಂಗಳ ಹಿಂದಷ್ಟೆ ಕೃಷ್ಣವೇಣಿಯನ್ನ ಕೋಲಾರ (Kolar) ಮೂಲದ ಪೃಥ್ವಿರಾಜ್ (30)ಗೆ ವಿವಾಹ ಮಾಡಿಕೊಡಲಾಗಿತ್ತು. ಪೃಥ್ವಿರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ.
ಇದೀಗ ಕೃಷ್ಣವೇಣಿ ಕುಟುಂಬದವರು ಕತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ. ಮದುವೆಯಾದ ಎರಡು ತಿಂಗಳಿಗೆ ಕಿರಿಕ್ ಶುರುಮಾಡಿದ್ದ. ಮದುವೆಯಾದ ಮೂರು ತಿಂಗಳಿಗೆ ನಾಲ್ಕೈದು ಬಾರಿ ಜಗಳ ಮಾಡಿ ತವರಿಗೆ ಕಳುಹಿಸಿದ್ದ. ಗುರುವಾರವೂ ಕುಡಿದು ಬಂದು ಗಲಾಟೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.





