ಸ್ನೇಹಿತನನ್ನೇ ಹತ್ಯೆಗೈದ ಯುವತಿ
ಬೆಂಗಳೂರು: ಯುವತಿಯೊಬ್ಬಳು ಲಿವಿಂಗ್ ಟು ಗೆದರ್‌ನಲ್ಲಿದ್ದ ಸ್ನೇಹಿತನ ಮೇಲಿನ ಸಂಶಯದಿಂದಾಗಿ ಆತನನ್ನು ಹತ್ಯೆಗೈದ ಪ್ರಕರಣ ಹುಳಿಮಾವಿನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಬೆಳಗಾವಿ ಮೂಲದ ರೇಣುಕಾ (34) ಎಂದು ಗುರುತಿಸಲಾಗಿದೆ. ಯುವತಿ ಕೇರಳ ಮೂಲದ ಜಾವಿದ್ (24) ಎಂಬಾತನ ಜೊತೆ ಆಪಾರ್ಟ್‍ಮೆಂಟ್ ಒಂದರಲ್ಲಿ ವಾಸವಾಗಿದ್ದಳು.
ಇಬ್ಬರೂ ಪರಸ್ಪರ ಸಂಶಯದಿಂದ ಆಗಾಗ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕಾಗಿ ಆತನನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.





