March 15, 2026

ಬೆಳ್ತಂಗಡಿ: ಗಾಂಜಾ ಸೇವಿಸಿ, ಅನುಚಿತ ವರ್ತನೆ: ಬಂಟ್ವಾಳದ ಇಬ್ಬರ ಬಂಧನ

0
IMG-20230903-WA0003.jpg



ಬೆಳ್ತಂಗಡಿ: ಬೆಳ್ತಂಗಡಿ ತಾಲೂಜಿನ ಇಳಂತಿಲ ಗ್ರಾಮದ ರಿಫಾಯಿನಗರ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಡೋಳಿ ಬಂಟ್ವಾಳ ನಿವಾಸಿ ಸಹ್ಯಾಝ್ ಅಹಮ್ಮದ್ (23) ಹಾಗೂ ಬಿಳಿಯೂರು ಗ್ರಾಮದ ಸಲೀಂ ಹುಸೈನ್ (40) ಬಂಧಿತರು.

ಆರೋಪಿಗಳು ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಬಂಧಿತರಿಂದ ಮೊಬೈಲ್‌ ಪೋನ್ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!