July 5, 2026

ಉಡುಪಿ: ದೋಣಿಯಿಂದ ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

0
hr-030923-boat.jpg


 
ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಿಂದ ಎರಡು ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಿಂದ ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಜಾರ್ಕಂಡ್ ಮೂಲದ ಮನೋಜ್ ಸಾನ್ (32) ಮೃತ ವ್ಯಕ್ತಿ.

ಮೀನು ಹಿಡಿಯುತ್ತಿದ್ದಾಗ ಮನೋಜ್ ಸಮುದ್ರಕ್ಕೆ ಬಿದ್ದಿದ್ದು, ಮನೋಜ್ ಜೊತೆಗೆ ಬೋಟ್ ನಲ್ಲಿದ್ದ ಕೀರ್ತನ್ ತಕ್ಷಣ ಸಮುದ್ರಕ್ಕೆ ಧುಮುಕಿ ಮನೋಜ್ ನನ್ನು ಮೇಲಕ್ಕೆ ಕರೆತಂದಿದ್ದಾರೆ. ಆದರೆ ಬಿದ್ದ ರಭಸಕ್ಕೆ ಮನೋಜ್ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”

Leave a Reply

Your email address will not be published. Required fields are marked *

You may have missed

error: Content is protected !!