ಪ್ರಯಾಣಿಕರಿಗೆ ನಮಾಝ್ ಮಾಡಲು ಬಸ್ ಅನ್ನು ನಿಲ್ಲಿಸಿದ್ದಕ್ಕೆ ಕಂಡಕ್ಟರ್ ಕರ್ತವ್ಯದಿಂದ ಅಮಾನತು: ಮನನೊಂದು ಕಂಡೆಕ್ಟರ್ ಆತ್ಮಹತ್ಯೆ

ನವದೆಹಲಿ: ಪ್ರಯಾಣದ ನಡುವೆಯೇ ಕೆಲವು ಪ್ರಯಾಣಿಕರಿಗೆ ನಮಾಜ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಅನ್ನು ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಕಂಡಕ್ಟರ್ ನನ್ನು ಕರ್ತವ್ಯದಿಂದ ಅಮಾನತುಗೊಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಬೆಳವಣಿಗೆ ನಂತರ ಬಸ್ ಕಂಡಕ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬರೇಲಿ-ದೆಹಲಿ ಜನರಥ್ ಬಸ್ ಅನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರು ನಮಾಜ್ ಮಾಡುವ ನಿಟ್ಟಿನಲ್ಲಿ ನಿಲ್ಲಿಸಿದ್ದರಿಂದ ಜೂನ್ ನಲ್ಲಿ ಕಂಡಕ್ಟರ್ ಮೋಹಿತ್ ಯಾದವ್ ಅವರ ಗುತ್ತಿಗೆ ಕರಾರನ್ನು ರದ್ದುಪಡಿಸಲಾಗಿತ್ತು.
ಇದರ ಪರಿಣಾಮ ಮೋಹಿತ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದದ್ದು, ಸೋಮವಾರ ಮೈನ್ ಪುರಿಯಲ್ಲಿ ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.