May 4, 2026

ವಿಟ್ಲದ ಕಾಶಿಮಠದ ಸಿಎನ್‌ಜಿ ಆಟೋ ಗ್ಯಾಸ್ ಬಂಕ್‌ನಲ್ಲಿ ಗ್ಯಾಸ್ ಸೋರಿಕೆ

0
IMG-20260316-WA0000.jpg

ವಿಟ್ಲ: ಕಾಶಿಮಠದ ಸಿಎನ್‌ಜಿ ಆಟೋ ಗ್ಯಾಸ್ ಬಂಕ್‌ನಲ್ಲಿ ಇಂದು ಬೆಳಿಗ್ಗೆ ಗ್ಯಾಸ್ ತಂದಿದ್ದ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅನಿಲ ಸೋರಿಕೆಯಾಗಿದೆ.

ವಿಡಿಯೋದಲ್ಲಿ ಕಾಣುವಂತೆ ಅನಿಲವು ದಟ್ಟವಾಗಿ ಆವರಿಸಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿತ್ತು. ಗ್ಯಾಸ್ ಸಂಪೂರ್ಣವಾಗಿ ಖಾಲಿಯಾದ ನಂತರವಷ್ಟೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ವಿಟ್ಲದ ಕಾಶಿಮಠ ಸಮೀಪವಿರುವ ಸಿಎನ್‌ಜಿ ಆಟೋ ಗ್ಯಾಸ್ ಬಂಕ್‌ನಲ್ಲಿ ಇಂದು ಬೆಳಿಗ್ಗೆ ಅನಿಲ ಸೋರಿಕೆಯಾದ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಸಿತ್ತು.

ಗ್ಯಾಸ್ ತುಂಬಿಸಿಕೊಂಡು ಬಂದಿದ್ದ ವಾಹನವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಈ ಸೋರಿಕೆ ಉಂಟಾಗಿದೆ ಎಂದು ತಿಳಿದುಬಂದಿದೆ. ಸೋರಿಕೆಯ ತೀವ್ರತೆ ಕಂಡು ಸ್ಥಳೀಯರು ಹಾಗೂ ಬಂಕ್ ಸಿಬ್ಬಂದಿ ಗಾಬರಿಗೊಂಡಿದ್ದರು. ತಾಂತ್ರಿಕ ದೋಷವನ್ನು ಸರಿಪಡಿಸಲು ಮತ್ತು ಸೋರಿಕೆಯನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಯಿತು.

ಸುಮಾರು ಸಮಯದವರೆಗೆ ಮುಂದುವರಿದ ಈ ಸೋರಿಕೆಯು, ವಾಹನದಲ್ಲಿದ್ದ ಅನಿಲ ಸಂಪೂರ್ಣವಾಗಿ ಖಾಲಿಯಾದ ಬಳಿಕವಷ್ಟೇ ನಿಂತಿದೆ. ಗ್ಯಾಸ್ ಖಾಲಿಯಾದ ನಂತರ ಪರಿಸ್ಥಿತಿ ತಿಳಿಗೊಂಡಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!