ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ – ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಮೃತ್ಯು
ಕಾರು ಅಪಘಾತದಲ್ಲಿ ಆಂಧ್ರಪ್ರದೇಶದ ಅನಿವಾಸಿ ಕುಟುಂಬವೊಂದರ ನಾಲ್ಕು ಸದಸ್ಯರು ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದ ರಿಯಾದ್ ಬಳಿ ನಡೆದಿದೆ ಎಂದು ತಿಳಿದು ಬಂದಿದೆ.
ಕುವೈತ್ ನಲ್ಲಿ ಉದ್ಯೋಗಿಯಾಗಿರುವ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ದಂಡು ಗೌಸ್ ಬಾಶಾ ಎಂಬುವವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸೌದಿ ಅರೇಬಿಯಾಗೆ ತೆರಳಿದ್ದು, ಅಪಘಾತ ಸಂಭವಿಸಿದಾಗ ಅವರ ಕುಟುಂಬವು ಕುವೈತ್ ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿತ್ತು ಎಂದು ಹೇಳಲಾಗಿದೆ.
ಸುಮಾರು 10 ದಿನಗಳ ಹಿಂದೆ ತಾವು ಖರೀದಿಸಿದ್ದ ನೂತನ ಕಾರಿನೊಂದಿಗೆ ಸೌದಿ ಅರೇಬಿಯಾದ ಮಕ್ಕಾಗೆ ಭೇಟಿ ನೀಡಲು ತಮ್ಮ ಪತ್ನಿ ತಬಾರಕ್ ಸರ್ವಾರ್ (31) ಹಾಗೂ ಇಬ್ಬರು ಪುತ್ರರಾದ ಎಶಾನ್ (4) ಮತ್ತು ದಮೀಲ್ (3) ಅವರೊಂದಿಗೆ ಗೌಸ್ ತೆರಳಿದ್ದರು ಎನ್ನಲಾಗಿದೆ.


