October 27, 2026

ಬಂಟ್ವಾಳ ಪುರಸಭೆಯ ಲೆಕ್ಕ ಪರಿಶೋಧನಾ ವರದಿ ಆಕ್ಷೇಪಣೆಗಳ ಕುರಿತು ಸಮಗ್ರ ತನಿಖೆಗೆ ಎಸ್ಡಿಪಿಐ ಆಗ್ರಹ

0
image_editor_output_image-2021223004-1793069946582

ಬಂಟ್ವಾಳ: ಬಂಟ್ವಾಳ ಪುರಸಭೆಯ 2024-25ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿರುವ ಆಕ್ಷೇಪಣೆಗಳ ಕುರಿತು ಸಮಗ್ರ ತನಿಖೆ ನಡೆಸಿ, ಸಾರ್ವಜನಿಕ ಹಣದ ನಷ್ಟಕ್ಕೆ ಹೊಣೆಗಾರಿಕೆ ನಿಗದಿ ಪಡಿಸಬೇಕು ಎಂದು ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಆಗ್ರಹಿಸುತ್ತದೆ ಎಂದು ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್ ಹೇಳಿದ್ದಾರೆ.

ಬಿ.ಸಿ ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ವರದಿಯಲ್ಲಿ ಜಿಎಸ್‌ಟಿ ಪಾವತಿ ವಿಳಂಬದಿಂದ ರೂ.8,54,528 ಬಡ್ಡಿ ಹೊರೆ ಹಾಗೂ ಟೆಂಡರ್ ಪ್ರಕ್ರಿಯೆಯ ಲ್ಲಿನ ಆಕ್ಷೇಪಣೆಗಳು ಉಲ್ಲೇಖವಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆಯ ಮೇಲ್ವಿಚಾರಣೆ ಯಲ್ಲಿ ತನಿಖೆ ನಡೆಸಿ, ತಪ್ಪು ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸುಮಾರು ರೂ.153 ಕೋಟಿ ಮೊತ್ತದ ಹಿಂದಿನ ಕುಡಿಯುವ ನೀರಿನ ಯೋಜನೆ ಹಾಗೂ ರೂ.36.91 ಕೋಟಿ ವೆಚ್ಚದ ಅಮೃತ್ 2.0 ಯೋಜನೆಯ ಅನುದಾನ, ವೆಚ್ಚ ಮತ್ತು ಕಾಮಗಾರಿಗಳ ಪ್ರಗತಿಯ ವಿವರಗಳನ್ನು ಬಹಿರಂಗಪಡಿಸಬೇಕು. ನೀರಿನ ಕೊರತೆ, ಪೈಪ್‌ಲೈನ್ ಸೋರಿಕೆ, ಬಿ.ಸಿ.ರೋಡ್ ಸಂಚಾರ ಅವ್ಯವಸ್ಥೆ, ಅಪಘಾತ ತಡೆ, ಪಾರ್ಕಿಂಗ್, ಪಾದಚಾರಿ ಸುರಕ್ಷತೆ, ಕಸ ನಿರ್ವಹಣೆ ಹಾಗೂ ಬೀದಿ ದೀಪ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಲೆಕ್ಕ ಪರಿಶೋಧನಾ ಆಕ್ಷೇಪಣೆಗಳ ಕುರಿತು 30 ದಿನಗಳೊಳಗೆ ಪ್ರಾಥಮಿಕ ಪರಿಶೀಲನಾ ವರದಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು, ಬಿ.ಸಿ.ರೋಡ್ ಸಿಟಿ ಸಮಿತಿ ಅಧ್ಯಕ್ಷ ಅನ್ಸಾರ್ ಕೆ.ಎಚ್. ಹಾಗೂ ಪಾಣೆಮಂಗಳೂರು ಸಿಟಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!