October 27, 2026

ಇಂದಿನ ಬಹುತೇಕ ಮುಸ್ಲಿಮರು ಮಾಜಿ ದಲಿತರು: ರಿಜ್ವಾನ್ ಅರ್ಷದ್

0
IMG-20261026-WA0320

ಬೆಂಗಳೂರು: ಮುಸ್ಲಿಂ ಸಮುದಾಯ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು ಬೇರೆ ಬೇರೆಯಲ್ಲ. ಇಂದಿನ ಬಹುತೇಕ ಮುಸ್ಲಿಮರು ಹಿಂದಿನ ಎಸ್‌ಸಿ, ಎಸ್‌ಟಿ ಸಮುದಾಯದವರು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಲಿತ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಾಮಾಜಿಕ ಬಾಂಧವ್ಯದ ಕುರಿತು ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ದಲಿತ ಕೇರಿಗಳು ಎಲ್ಲೆಲ್ಲಿ ಇರುತ್ತವೆಯೋ, ಮುಸ್ಲಿಮರು ಕೂಡ ಅದೇ ಪರಿಸರದಲ್ಲಿ ವಾಸಿಸುತ್ತಾರೆ. ನಮ್ಮ ಪೂರ್ವಿಕರು ಯಾವ ಕಾರಣಕ್ಕಾಗಿ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಧರ್ಮ ಬದಲಾವಣೆಯಾದ ಮಾತ್ರಕ್ಕೆ ಮೈಯಲ್ಲಿ ಹರಿಯುವ ರಕ್ತ ಬದಲಾಗುವುದಿಲ್ಲ. ಹೀಗಾಗಿ ನಾವೆಲ್ಲರೂ ಒಂದೇ ಸಮುದಾಯದವರು, ನಮ್ಮ ನಡುವೆ ಯಾವುದೇ ಭೇದಭಾವವಿಲ್ಲ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಮುಸ್ಲಿಮರೆಲ್ಲರೂ ಮಾಜಿ ದಲಿತರು ಎಂದು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *

error: Content is protected !!