October 27, 2026

ಮಂಗಳೂರು: ಬಸ್ ಢಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು; ಗುರುತು ಪತ್ತೆಗೆ ಪೊಲೀಸರ ಮನವಿ

0
image_editor_output_image-2022146525-1793069875799

ಮಂಗಳೂರು: ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ.22ರಂದು ಬಸ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಅಪರಿಚಿತ ಯುವಕನೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ಮಹಾಕಾಳಿಪಡ್ಪು ಕಡೆಯಿಂದ ಜಪ್ಪಿನಮೊಗರು ಕಡೆಗೆ ನಡೆದು ಕೊಂಡು ಬರುತ್ತಿದ್ದ ಸುಮಾರು 30ರಿಂದ 35ರ ಹರೆಯದ ಅಪರಿಚಿತ ಯುವಕನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರ ಗಾಯವಾಗಿತ್ತು.

ಗಾಯಾಳುವನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಯುವಕ ಅ.23ರಂದು ಮೃತಪಟ್ಟಿದ್ದನು. ಮೃತಪಟ್ಟ ಅಪರಿಚಿತ ಯುವಕನ ಮೃತದೇಹವನ್ನು ವೆನ್‌ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ವ್ಯಕ್ತಿಯ ವಿಳಾಸ , ವಾರೀಸುದಾರರು ಇದ್ದಲ್ಲಿ ಪೊಲೀಸ್ ನಿರೀಕ್ಷರು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆ (0824-2220850, 9480805371) ಅಥವಾ ಮಂಗಳೂರು ಪೊಲೀಸ್ ನಿಸ್ತಂತು ಕೊಠಡಿಗೆ (0824-2220800, 9480802321)ಮಾಹಿತಿ ನೀಡುವಂತೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!