October 27, 2026

ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ವ್ಯಕ್ತಿ  ನಾಪತ್ತೆ

0
image_editor_output_image1174897371-1793079925010

ಮಂಗಳೂರು: ಉತ್ತಮ ಜೀವನೋಪಾಯ ಹಾಗೂ ಭವಿಷ್ಯದ ಕನಸಿನೊಂದಿಗೆ ಉದ್ಯೋಗ ವೀಸಾದಡಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಕಳೆದ ಹತ್ತು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಪತಿಯ ಯಾವುದೇ ಸುಳಿವು ಸಿಗದೆ ಆತಂಕಕ್ಕೊಳಗಾಗಿರುವ ಕುಟುಂಬಸ್ಥರು, ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದೂರು ನೀಡಿ ತುರ್ತು ರಕ್ಷಣೆಗೆ ಮನವಿ ಮಾಡಿದ್ದಾರೆ. ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್ (41) ನಾಪತ್ತೆಯಾದವರುಹಡಗು ಕಾಯ್ದಿರಿಸಿ

ಮಂಗಳೂರಿನ ಅಧಿಕೃತ ನೇಮಕಾತಿ ಸಂಸ್ಥೆಯೊಂದರ ಮೂಲಕ ಶಡ್ರಕ್ ಇಮ್ಯಾನುವಲ್ ಅವರು 2025ರ ಮೇ 16ರಂದು ಉದ್ಯೋಗ ವೀಸಾದಡಿ ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದರು. ಅವರು ಇಸ್ರೇಲ್‌ನ ನಜರೆತ್ ಸಮೀಪದ ನೊಫ್ ಹಗಲಿಲ್ ಎಂಬಲ್ಲಿರುವ ‘ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್’ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಶಡ್ರಕ್ ಅವರ ಪತ್ನಿ ಡೇಸಿ ಇಮ್ಯಾನುವಲ್ ನೀಡಿದ ಮಾಹಿತಿಯಂತೆ, ಶಡ್ರಕ್ ಅವರು ಪ್ರತಿದಿನವೂ ಮನೆಯವರೊಂದಿಗೆ ವಾಟ್ಸ್‌ಆ್ಯಪ್ ಮೂಲಕ ಮಾತನಾಡುವುದು ನಿತ್ಯ ಕಾಯಕವಾಗಿತ್ತು. ಅಕ್ಟೋಬರ್ 16, 2026ರ ಶುಕ್ರವಾರ ರಾತ್ರಿ 8:05ಕ್ಕೆ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಿ ಕುಟುಂಬಸ್ಥರೊಂದಿಗೆ ಸುಮಾರು 22 ನಿಮಿಷಗಳ ಕಾಲ ಕ್ಷೇಮ ಸಮಾಚಾರ ಹಂಚಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!