ಬುರ್ಖಾ ಧರಿಸಿ ಮಹಿಳೆಯರ ವಾಶ್ ರೂಮ್ ನಲ್ಲಿ ವಿಡಿಯೋ ರೆಕಾರ್ಡ್: ಆರೋಪಿ ಅಭಿಮನ್ಯು ಬಂಧನ
ಕೊಚ್ಚಿ: ಕೊಚ್ಚಿಯ ಮಾಲ್ ಒಂದರಲ್ಲಿ ಯುವಕನೋರ್ವ ಬುರ್ಖಾ ಧರಿಸಿ ಮಹಿಳೆಯರ ವಾಶ್ ರೂಮ್ ಗೆ ನುಗ್ಗಿ ವಿಡಿಯೋ ರೆಕಾರ್ಡ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬಿಟೆಕ್ ಪದವೀಧರನಾಗಿದ್ದು, ಇನ್ಫೋಪಾರ್ಕ್‌ನ ಪ್ರಮುಖ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಮನ್ಯು (23) ಎಂದು ಗುರುತಿಸಲಾಗಿದೆ.
ಅಭಿಮನ್ಯು ಆರೋಪಿ ಬುರ್ಖಾ ಧರಿಸಿ ಮಹಿಳೆಯರ ವಾಸ್ ರೂಮ್ ಗೆ ನುಗ್ಗಿ ಆ ವಾಸ್ ರೂಮ್ ನಲ್ಲಿ ಸಣ್ಣ ರಂದ್ರ ಕೊರೆದು ಸಣ್ಣ ರಟ್ಟಿನ ಪೆಟ್ಟಿಗೆಯಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಆನ್ ಮಾಡಿದ್ದ. ಬಳಿಕ ಹೊರಗೆ ಬಂದು ವಾಶ್ ರೂಂನ ಮುಖ್ಯ ಬಾಗಿಲಿನ ಮುಂದೆ ನಿಂತಿದ್ದ, ಇದರಿಂದ ಆತನ ವರ್ತನೆಯಲ್ಲಿ ಮಾಲ್ ಸಿಬ್ಬಂದಿಗೆ ಅನುಮಾನ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಆತನಿಂದ ಬುರ್ಖಾ ಹಾಗೂ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ವಿರುದ್ಧ ವಿರುದ್ಧ ಐಪಿಎಸ್ ಸೆಕ್ಷನ್ 354 (ಸಿ), 419 ಮತ್ತು 66 ಇ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಲಮಸೇರಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.





