September 20, 2024

ಮಂಗಳೂರು: ಆಸ್ಪತ್ರೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಆರೋಪಿಯ ಬಂಧನ

0

ಮಂಗಳೂರು: ಆಸ್ಪತ್ರೆಯಲ್ಲಿ ಭಿನ್ನ ಸಾಮರ್ಥ್ಯದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಮುಂಬೈಯ ವ್ಯಕ್ತಿ ಮತ್ತು ಸಹಕರಿಸಿದ ಮಹಿಳೆಯನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ, ಮುಂಬೈಯಲ್ಲಿ ವಾಸವಿರುವ ಅಬ್ದುಲ್‌ ಹಲೀಂ (37) ಮತ್ತು ಕುಲಶೇಖರದ ಶಮೀನಾ ಬಾನು (22) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ದೂರುದಾರ ಮಹಿಳೆಯ ತಮ್ಮ ಮನ್ಸೂರ್‌ ಅಹ್ಮದ್‌ ಬಾಬಾ ಶೇಖ್‌ ಮತ್ತು ಆತನ ಪರಿಚಯದ ಬಿಹಾರ ಮೂಲದ ಮುಂಬೈಯಲ್ಲಿ ವಾಸವಿರುವ ಅಬ್ದುಲ್‌ ಹಲೀಂ ಆ. 10 ತಮ್ಮ ಬೈಕ್‌ನಲ್ಲಿ ಕಾಸರಗೋಡಿಗೆ ಹೋಗಿ ವಾಪಸು ಬರುತ್ತಿದ್ದಾಗ ಮಂಜೇಶ್ವರ ಹೊಸಂಗಡಿ ಬಳಿ ಬೈಕ್‌ ಅಪಘಾತವಾಗಿದೆ.

ಘಟನೆಯಲ್ಲಿ ಇಬ್ಬರೂ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

Leave a Reply

Your email address will not be published. Required fields are marked *

error: Content is protected !!