ಬಂಟ್ವಾಳ: ಜಲ್ಲಿ ಕ್ರಶರ್ ಯಂತ್ರದ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು: ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ: ಜಲ್ಲಿ ಕ್ರಶರ್ ವೊಂದರಲ್ಲಿ ಕ್ರಶರ್ ಯಂತ್ರದ ಲಕ್ಷಾಂತರ ರೂ. ಮೌಲ್ಯದ ಸ್ವತ್ತೊಂದನ್ನು ಕಳವು ಮಾಡಲಾಗಿದ್ದ ಇಬ್ಬರು ಆರೋಪಿಗಳ ಸಹಿತ ಸ್ವತ್ತುಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಗ್ಗ ನಿವಾಸಿ ಸತೀಶ್ ಮತ್ತು ಬೆಳ್ತಂಗಡಿ ನಿವಾಸಿ ರೋಹಿತ್ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.





