ಭದ್ರತಾ ಕಾಳಜಿಯ ಕಾರಣದಿಂದ ಈ ದೇಶದಲ್ಲೂ “tiktok” Ban
ವಾಷಿಂಗ್ಟನ್: ಭದ್ರತಾ ಕಾಳಜಿಯ ಕಾರಣದಿಂದ ನ್ಯೂಯಾರ್ಕ್ ಸಿಟಿಯ ಸರ್ಕಾರಿ ಸಾಧನಗಳಲ್ಲಿ ಚೀನಾ ಮೂಲದ ವೀಡಿಯೋ ಹಂಚಿಕೆ ಪ್ಲಾಟ್‌ಪಾರ್ಮ್ ಟಿಕ್‌ಟಾಕ್ ಅನ್ನು ಬ್ಯಾನ್ ಮಾಡಲಾಗಿದೆ.
ನ್ಯೂಯಾರ್ಕ್ ಸಿಟಿಯ ಮೇಯರ್ ಎರಿಕ್ ಆಡಮ್ಸ್ ಆಡಳಿತ, ಟಿಕ್‌ಟಾಕ್ ನಗರದ ತಾಂತ್ರಿಕ ಜಾಲಗಳಿಗೆ ಭದ್ರತಾ ಬೆದರಿಕೆಗಳನ್ನು ಒಡ್ಡಿದೆ ಎಂದು ತಿಳಿಸಿದೆ.
ಈ ಮೂಲಕ ಟಿಕ್‌ಟಾಕ್ ಅನ್ನು ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ನ್ಯೂಯಾರ್ಕ್ ಕೂಡಾ ಸೇರಿಕೊಳ್ಳುತ್ತದೆ ಎಂದು ವರದಿಗಳು ತಿಳಿಸಿವೆ





