ಅಂಡರ್ ಪಾಸ್‌ನಲ್ಲಿ ಸಿಲುಕಿದ ಗ್ಯಾಸ್ ತುಂಬಿದ ಟ್ಯಾಂಕರ್
ಧಾರವಾಡ: ಗ್ಯಾಸ್ ತುಂಬಿದ ಟ್ಯಾಂಕರ್ ಒಂದು ಅಂಡರ್ ಪಾಸ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸೇತುವೆಗೆ ತಾಗಿ ಗ್ಯಾಸ್ ಲೀಕ್ ಆಗಿರುವ ಘಟನೆ ಧಾರವಾಡದ ಬೇಲೂರು ಗ್ರಾಮದ ಬಳಿಯ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದೆ. ಸದ್ಯ ಆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಗ್ಯಾಸ್ ಲೀಕೇಜ್ ದೊಡ್ಡ ಮಟ್ಟದಲ್ಲಿ ಆಗಿದ್ದು, ಜನ ಸಂಚಾರ ಹಾಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿದ್ದು, ಯಾವುದೇ ಅನಾಹುತ ಆಗದಂತೆ ಕಣ್ಣಿಟ್ಟಿದ್ದಾರೆ.
ಹೈಕೋರ್ಟ್ ಅಕ್ಕಪಕ್ಕದ ಬೇಲೂರು, ಕೋಟೂರು, ಮುಮ್ಮಿಗಟ್ಟಿ ಸೇರಿದಂತೆ ಇಡಿ ಕೈಗಾರಿಕಾ ಪ್ರದೇಶದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.





