ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ತಾಳಿತ್ತನೂಜಿ ಶಾಲಾ ಮಕ್ಕಳಿಗೆ ದೂರದರ್ಶನದ (TV) ಕೊಡುಗೆ
ಬಂಟ್ವಾಳ: ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ತಾಳಿತ್ತನೂಜಿಯ ಶಾಲಾ ಮಕ್ಕಳಿಗೆ ಕಲಿ-ನಲಿಯುವುದರ ಜೊತೆಗೆ ದೂರದರ್ಶನದ (TV) ಅವಶ್ಯಕತೆಯಿರುವುದರಿಂದ ಇದನ್ನು ಮನಗಂಡು ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ವತಿಯಿಂದ ದಿನಾಂಕ 15-8-2023 ರಂದು ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ದೂರದರ್ಶನವನ್ನು (TV) ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯರಾದ ಸುಂದರ ಹಾಗೂ ಶಾಲಾ ಎಸ್ ಡಿ ಯಂ ಅಧ್ಯಕ್ಷರಾದ ಅಬ್ದುಲ್ ಖಾದರ್, ಗೌರವಧ್ಯಕ್ಷರಾದ ಯೂಸುಫ್ ತಾಳಿತ್ತನೂಜಿ ಮತ್ತು ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ ಇದರ ಅಧ್ಯಕ್ಷರಾದ ಝಕರಿಯಾ ನಾರ್ಷ, ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್ ಮತ್ತು ಸಲಹೆಗಾರರಾದ ಲತೀಫ್ ಪರ್ತಿಪ್ಪಾಡಿ, ಸಿ.ಹೆಚ್ ರಝಾಕ್. ಹಾಗೂ ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ನಾರಾಯಣ ಶೆಟ್ಟಿ ಕುಲ್ಯಾರ್, ಮತ್ತು ಲತೀಫ್ ಮದಕ, ಜಮಾಲು ಬಾರೆಬೆಟ್ಟು, ಅಬೂಬಕ್ಕರ್ ಕುಲ್ಯಾರ್, ಮಧುಕರ ಶೆಟ್ಟಿ ಹಾಗೂ ಶಾಲಾ ಸಮಿತಿಯ ಅಧ್ಯಕ್ಷರು / ಸರ್ವ ಸದಸ್ಯರೂ, ಸಿಬ್ಬಂದಿ ವರ್ಗದವರು ಮತ್ತು ಹಿರಿಯ ವಿದ್ಯಾರ್ಥಿಗಳು, ಇನ್ನಿತರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರು, ಊರಿನ ನಾಗರಿಕರು ಉಪಸ್ಥಿತಿದ್ದರು.





