ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಬಂಟ್ವಾಳ: ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಮಾಣಿಯ ಬಿ.ಎಮ್.ಆರ್ ಪೆಟ್ರೋಲ್ ಬಂಕ್ ಬಳಿ ನಡೆಯಿತು.ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷರಾದ ಅಬ್ದುಲ್ ರಹೀಂ ಸುಲ್ತಾನ್ ಧ್ವಜಾರೋಹಣಗೈದರು.
ಸೂರಿಕುಮೇರ್ ಜುಮ್ಮಾ ಮಸೀದಿ ಖತೀಬರಾದ ಮುಹಮ್ಮದ್ ಹನೀಫ್ ಸಹದಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ವಿವರಿಸಿದರು.
ಮುಸ್ಲಿಂ ಸೆಂಟ್ರಲ್ ಸಮಿತಿ ಸದಸ್ಯರಾದ ಹನೀಫ್ ಖಾನ್ ಕೊಡಾಜೆ, ಈ ದೇಶದಲ್ಲಿ ಅಹಿಂದ ಮತ್ತು ಸ್ತ್ರೀಯರಿಗೆ ಸ್ವಾತಂತ್ರ್ಯ ಎಂಬುದು ಇನ್ನೂ ಕನಸಿನ ಕೂಸಾಗಿದ್ಧು, ಅವರ ವಿಮೋಚನೆಗಾಗಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ಸಿನ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ,ದೇಶವನ್ನು ಕೋಮುವಾದದ ಮೂಲಕ ಒಡೆಯಲು ಹೊರಟಿರುವ ದುಷ್ಟ ಶಕ್ತಿಗಳ ವಿರುದ್ಧ ಎಲ್ಲರೂ ಒಂದಾಗಿ ಧ್ವನಿಯೆತ್ತಬೇಕಾಗಿದೆ ಎಂದು ಎಚ್ಚರಿಸಿದರು.
ವೇದಿಕೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ, ಸದಸ್ಯರಾದ ಮೆಲ್ವಿನ್,ಸೂರಿಕುಮೇರ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಾಜಿ ಹಮೀದ್ ಇನ್ನಿತರರು ಉಪಸ್ಥಿತರಿದ್ಧರು.
ಸೋಶಿಯಲ್ ಇಖ್ವಾ ಫೆಡರೇಶನ್ ಪ್ರದಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ಸ್ವಾಗತಿಸಿ,ಶೈಕ್ಷಣಿಕ ಕಾರ್ಯದರ್ಶಿ ಲತೀಫ್ ಕೊಡಾಜೆ ವಂದಿಸಿದರು.ಜೊತೆ ಕಾರ್ಯದರ್ಶಿ ರಶೀದ್ ನೀರಪಾದೆ ಕಾರ್ಯಕ್ರಮ ನಿರೂಪಿಸಿದರು.





