December 19, 2025

ಡಿಸಿ ಕಚೇರಿಯ ಬಾಗಿಲಲ್ಲೇ ಧರಣಿ ಕುಳಿತ BJP ಶಾಸಕರು

0
image_editor_output_image326388663-1692003863657.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಶಾಸಕರ ಹಕ್ಕಿಗೆ ಚ್ಯುತಿಯಾಗುತ್ತಿಯೆಂದು ಹಾಗೂ ಅಧಿಕಾರಿಗಳ ಅಮಾನತು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ‌ ಶಾಸಕರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆ. 14 ರ ಸೋಮವಾರ ಪ್ರತಿಭಟನೆ ನಡೆಯುತ್ತಿದೆ.

ಶಾಸಕರ ಹಕ್ಕುಚ್ಯುತಿ ಆಗಿದೆ, ಮೂಡುಬಿದಿರೆ ಕ್ಷೇತ್ರದ ಇರುವೈಲು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಕ್ಷೇತ್ರದ ಇರ್ವತ್ತೂರು ಗ್ರಾಮ ಪಂಚಾಯತ್ ನ ಉದ್ಘಾಟನಾ ಕಾರ್ಯಕ್ರಮವನ್ನು ಶಿಷ್ಟಾಚಾರ ನೆಪದಲ್ಲಿ ರದ್ದುಪಡಿಸಿ, ಅಧಿಕಾರಿಗಳ ಅಮಾನತುಗೊಳಿಸಿರುವುದನ್ನು ಖಂಡಿಸಿ, ಹಾಗೂ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಡಿಸಿ ಕಚೇರಿಯ ಬಾಗಿಲಲ್ಲಿ ಶಾಸಕರು ಧರಣಿ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!