ವಿಟ್ಲ: ಕರೋಪಾಡಿ ಗ್ರಾಮ ಪಂಚಾಯತ್: ಅಧ್ಯಕ್ಷರಾಗಿ ಸೂರ್ಯಕಾಂತಿ, ಉಪಾಧ್ಯಕ್ಷರಾಗಿ ಅನ್ವರ್ ಕರೋಪಾಡಿ ಆಯ್ಕೆ
ವಿಟ್ಲ: ಬಂಟ್ವಾಳ ತಾಲೂಕಿನ ಗಡಿಭಾಗವಾದ ಕರೋಪಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿರೋದ ಪಕ್ಷ ನಾಮಪತ್ರ ಸಲ್ಲಿಸದ ಹಿನ್ನೆಲೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ ಸೂರ್ಯಕಾಂತಿ ಹಾಗೂ ಉಪಾಧ್ಯಕ್ಷರಾಗಿ ನಾಮಪತ್ರ ಸಲ್ಲಿಸಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅನ್ವರ್ ಕರೋಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರೋಪಾಡಿ ಗ್ರಾ.ಪಂ ನಲ್ಲಿ ಒಟ್ಟು 16 ಸದಸ್ಯರಿದ್ದು, 10 ಕಾಂಗ್ರೆಸ್ ಮತ್ತು 6 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಯಾರೂ ನಾಮಪತ್ರ ಸಲ್ಲಿಸ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಸಯಿತು.





