December 19, 2025

ಪೆರುವಾಯಿ ಗ್ರಾ.ಪಂ ನಲ್ಲಿ ವಿಚಿತ್ರ ಬೆಳವಣಿಗೆ: ಕಾಂಗ್ರೆಸ್ ನಲ್ಲಿ ಬಹುಮತವಿದ್ದರೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲು: ಅಧ್ಯಕ್ಷರಾಗಿ ನೆಫೀಸ, ಉಪಾಧ್ಯಕ್ಷರಾಗಿ ಲಲಿತಾ ಆಯ್ಕೆ

0
image_editor_output_image-784008128-1691749955340

ವಿಟ್ಲ : ಪೆರುವಾಯಿ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆ.11 ರಂದು ನಡೆಯಿತು.
ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ನೆಫೀಸ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ‌ ಬೆಂಬಲಿತ ಸದಸ್ಯೆ ಲಲಿತಾ ಆಚಾರ್ಯ ರವರು ಆಯ್ಕೆಯಾಗಿದ್ದಾರೆ.

ಪೆರುವಾಯಿ ಗ್ರಾಮ ಪಂಚಾಯತ್‌ ನಲ್ಲಿ 8 ಮಂದಿ ಸದಸ್ಯರಿದ್ದು, ಅದರಲ್ಲಿ 5 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ 3 ಬಿಜೆಪಿ ಬಂಬಲಿತ ಸದಸ್ಯರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ನೆಪೀಸ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ
ಪೂಜಾರಿಯವರು ನಾಮಪತ್ರ ಸಲ್ಲಿಸಿದ್ದರು.

ಈ ವೇಳೆ ನಡೆದ ಮತದಾನದಲ್ಲಿ ಎರಡೂ ಅಭ್ಯರ್ಥಿಗಳು ಸಮಬಲ ಸಾಧಿಸಿದ್ದರು. ಬಳಿಕ ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ನಡೆದ ವೇಳೆ ನೆಪೀಸ ರವರು ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರಶ್ಮಿ ಎಂ. ಹಾಗೂ ಬಿಜೆಪಿ ಬೆಂಬಲಿತ ಸದಸ್ಯೆ ಲಲಿತಾ ಆಚಾರ್ಯ ರವರು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ನಡೆದ ಮತದಾನದಲ್ಲಿ ಎರಡೂ ಅಭ್ಯರ್ಥಿಗಳು ಸಮಬಲ ಸಾಧಿಸಿದ್ದರು. ಬಳಿಕ ಚೀಟಿ ಎತ್ತುವ ಮೂಲಕ ಉಪಾಧ್ಯಕ್ಷರ ಆಯ್ಕೆ ನಡೆದ ವೇಳೆ ಲಲಿತಾ ಆಚಾರ್ಯರವರು ಆಯ್ಕೆಯಾದರು.

ವಿಟ್ಲ ಸಿ.ಡಿ.ಪಿ.ಒ. ಉಷಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಶೋಕ್ ಸಹಕರಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ರಾಜೇಂದ್ರ ರೈ, ವರುಣ್ ರೈ, ನಾರಾಯಣ ನಾಯ್ಕ್ , ರಶ್ಮಿ ಎಂ., ಮಾಲತಿ ರವರು ಉಪಸ್ಥಿತರಿದ್ದರು.

ಎರಡು ಪಕ್ಷಗಳ ಪ್ರಮುಖರು ಆಗಮಿಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

You may have missed

error: Content is protected !!