May 14, 2026

ಬೆಳ್ತಂಗಡಿ: ರಕ್ತ ಚಂದನ ಕಳ್ಳಸಾಗಣೆ: ಇಬ್ಬರು ಪೊಲೀಸರ ವಶಕ್ಕೆ

0
IMG-20230811-WA0022.jpg

ಬೆಳ್ತಂಗಡಿ: ರಕ್ತ ಚಂದನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ 125 ಕೆ.ಜಿ ರಕ್ತಚಂದನವನ್ನು ವೇಣೂರು ವಲಯಾರಣ್ಯಧಿಕಾರಿ ನೇತೃತ್ವದ ತಂಡವು ವಶಕ್ಕೆ ಪಡೆದ ಘಟನೆ ವೇಣೂರು ಸಮೀಪ ಕರಿಮಣೇಲು ಎಂಬಲ್ಲಿ ನಡೆದಿದೆ.

ಆರೋಪಿತರಾದ ಬಂಟ್ವಾಳ ಮಾವಿನಕಟ್ಟೆ ನಿವಾಸಿ ಖಾಲಿದ್ ಹಾಗೂ ಗುರುವಾಯನಕೆರೆ ನಿವಾಸಿ ದೀಕ್ಷಿತ್ ಅವರನ್ನು ಬಂಧಿಸಲಾಗಿದೆ.

ಆರೋಪಿಗಳು ವೇಣೂರು ಕರಿಮಣೇಲು ಎಂಬಲ್ಲಿಂದ ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದರು. ಈ ವೇಳೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಲಯಾರಣ್ಯಧಿಕಾರಿ ಮಹೀಮ್ ಜನ್ನು ನೇತೃತ್ವದ ತಂಡ ಆರೋಪಿಗಳು ಸಹಿತ 125 ಕೆ.ಜಿ. ರಕ್ತಚಂದನ ಸಾಗಾಟಕ್ಕೆ ಬಳಸಿದ ವಾಹನ ವಶಕ್ಕೆ ‌ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!