ಮಾಜಿ ಕಾರ್ಪೊರೇಟರ್ ಪುತ್ರ ಲ ನೇಣು ಬಿಗಿದು ಆತ್ಮಹತ್ಯೆ
ಬೆಂಗಳೂರು: ಮಾಜಿ ಕಾರ್ಪೋರೇಟರ್ ಪುತ್ರ ಗೌತಮ್(29) ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಅತ್ತಿಗುಪ್ಪೆಯ ಮಾಜಿ ಕಾರ್ಪೊರೇಟರ್ ದೊಡ್ಡಣ್ಣ ಅವರ ಮೂರನೇ ಪುತ್ರ ಗೌತಮ್ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ದೊಡ್ಡಣ್ಣ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ದೊಡ್ಡಣ್ಣ ಅವರಿಗೆ ಮೂವರು ಪುತ್ರರಿದ್ದು, ಅದರಲ್ಲಿ ಕೊನೆಯವರು ಗೌತಮ. ಬುಧವಾರ ಮಧ್ಯಾಹ್ನ 1 ಗಂಟೆಗೆ ಊಟ ಮುಗಿಸಿಕೊಂಡು ಕೋಣೆಗೆ ಹೋದ ಗೌತಮ್, ಗುರುವಾರ ಮಧ್ಯಾಹ್ನವಾದರೂ ಹೊರಗಡೆ ಬಂದಿಲ್ಲ. ಹೀಗಾಗಿ ಊಟಕ್ಕೆ ಕರೆಯಲು ಅವರ ಸಹೋದರ ಕೋಣೆ ಬಳಿ ಹೋಗಿ, ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.





