ಉಳ್ಳಾಲ: ಲಕ್ಷಾಂತರ ಮೌಲ್ಯದ ಸೆಂಟ್ರಿಂಗ್ ಶೀಟ್ ಕಳವು
ಕೊಲ್ಯ: ಕೊಲ್ಯ ಶ್ರೀ ಶಾರದೋತ್ಸವ ಉತ್ಸವ ಸಮಿತಿಯ ನೂತನ ಮಂದಿರದ ವಠಾರದಿಂದ ಲಕ್ಷಾಂತರ ಮೌಲ್ಯದ ಸೆಂಟ್ರಿಂಗ್ ಶೀಟ್ ಗಳನ್ನು ಕಳವು ನಡೆಸಿರುವ ಘಟನೆ ಆ.10ರಂದು ನಡೆದಿದೆ.
ಗುತ್ತಿಗೆದಾರ ತೊಕ್ಕೊಟ್ಟು ನಿವಾಸಿ ಸುಂದರ ಗಟ್ಟಿ ಎಂಬವರು ಬಾಡಿಗೆಗೆ ತಂದಿದ್ದ 2.5 ಲಕ್ಷ ರೂ.ಗಳ 119 ತಗಡುಶೀಟುಗಳನ್ನು ಕಳವು ನಡೆಸಲಾಗಿದೆ.
ನಸುಕಿನ 2 ಗಂಟೆಯಿಂದ 3 ಗಂಟೆಯೊಳಗೆ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ.
ಸ್ಥಳೀಯ ಸಿಸಿಟಿವಿ ಆಧಾರದಲ್ಲಿ ಪಿಕಪ್ ವಾಹನವನ್ನು ಬಳಸಿಕೊಂಡು ಕೃತ್ಯ ಎಸಗಿರುವುದಾಗಿಯೂ ಗೊತ್ತಾಗಿದೆ.





