ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದ ಶೇಖ್ ಲತೀಫ್: ಅಲ್ ಫಲಾಹ್ ಸಂಸ್ಥೆ ವತಿಯಿಂದ ಸನ್ಮಾನ
ಬೆಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಕುಲಸಚಿವರಾದ ಶೇಖ್ ಲತೀಫ್ ಅವರನ್ನು ಮಂಗಳವಾರ (08/08) ಬೆಂಗಳೂರು ವಿ.ವಿ. ಕುಲಸಚಿವರ ಕಾರ್ಯಾಲಯ ಜ್ಞಾನಭಾರತಿಯಲ್ಲಿ ಭೇಟಿಯಾಗಿ ಅಲ್ ಫಲಾಹ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಅಲ್ ಫಲಾಹ್ ಮುಖ್ಯಸ್ಥರಾದ ಯೂಸುಫ್ ಎಸ್., ಬಂಟ್ವಾಳ ಜಮೀಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಉಪ್ಪಿನಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಅಬೂಬಕರ್ ಪುತ್ತು ಉಪಸ್ಥಿತರಿದ್ದರು.





