March 23, 2026

ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ: 170 ಮಂದಿಯ ಡಿಎಲ್ ರದ್ದು

0
IMG-20230808-WA0053.jpg

ಮಂಗಳೂರು: ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ 170 ಮಂದಿಯ ಅನುಜ್ಞಾ ಪತ್ರ(ಡಿ.ಎಲ್.)ವನ್ನು ಆರ್ ಟಿ ಒ ಅಧಿಕಾರಿಗಳು ರದ್ದುಗೊಳಿಸಿದ್ದಾರೆ.

ವಿವಿಧ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚಾಲಕರ ಅನುಜ್ಞಾ ಪತ್ರ ರದ್ದು ಪಡಿಸಲಾಗಿದೆ. 24 ಅಪಘಾತ ಪ್ರಕರಣಗಳು, 12 ಅತಿಯಾದ ವೇಗದ ಪ್ರಕರಣಗಳು, 11 ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ವಿಚಾರ, 95 ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ನಡೆಸಿದ ಪ್ರಕರಣಗಳು, 13 ಸೀಟ್ ಬೆಲ್ಟ್ ಧರಿಸದೇ ಚಾಲನೆ, 7 ರೆಡ್ ಸಿಗ್ನಲ್ ಜಂಪ್, 5 ಚಾಲನೆ ಸಂದರ್ಭ ಮೊಬೈಲ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಲ್ ರದ್ದುಗೊಳಿಸಲಾಗಿದೆ.

ಇನ್ನು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ 371 ವಾಹನಗಳ ವಿರುದ್ಧ ಕೇಸ್ ದಾಖಲಾಗಿದೆ. ಕರ್ಕಶ ಹಾರ್ನ್ ಬಳಕೆ 31, ಟಿಂಟ್ ಬಳಕೆ 23 ಪ್ರಕರಣಗಳು ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!