ಕಾರಿಗೆ ಢಿಕ್ಕಿ ಹೊಡೆದ ಟ್ರಕ್: ಯುವತಿ ಸಾವು, ಓರ್ವ ಗಾಯ
ನವದೆಹಲಿ: ಉತ್ತರ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಟ್ರಕ್‌ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 22 ವರ್ಷದ ಯುವತಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವರು ಗಾಯಗೊಂಡಿದ್ದಾರೆ.
ಚಂದಗಿರಾಮ್ ಅಖಾರ ಸಿಗ್ನಲ್‌ನಲ್ಲಿ ಚಾಲಕ ಟ್ರಕ್‌ವೊಂದರ ಹಿಂದೆ ಕಾರು ನಿಲ್ಲಿಸಿದ್ದಾನೆ. ಅದೇ ಸಮಯಕ್ಕೆ ವೇಗವಾಗಿ ಬಂದ ಮತ್ತೊಂದು ಟ್ರಕ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಇದರಿಂದ ಎರಡು ಟ್ರಕ್‌ಗಳ ಮಧ್ಯೆ ಸಿಲುಕಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಯುವತಿ ಸಾವನ್ನಪ್ಪಿದ್ದಾಳೆ. ಮೃತ ಯುವತಿಯನ್ನು ಅಮನ್‌ದೀಪ್ ಕೌರ್, ಕಾರು ಚಾಲಕನನ್ನು ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ





