March 23, 2026

 ಗೇಮ್‌ನಲ್ಲಿ ಹಣ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

0
image_editor_output_image732617532-1691473040303.jpg

ಕಲಬುರಗಿ: ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಪ್ರವೀಣ್ ಪಾಟೀಲ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಕಲಬುರಗಿ ನಗರದ ದೇವಿ ನಗರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರವೀಣ್ ನೇಣಿಗೆ ಶರಣಾಗಿದ್ದಾನೆ.

ಈತ ಕಲಬುರಗಿ ನಗರದ ಖಾಸಗಿ ಕಾಲೇಜ್‌ನಲ್ಲಿ ಬಿಇ (BE) ವ್ಯಾಸಂಗ ಮಾಡುತ್ತಿದ್ದು, ಬಿಇ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್ ಕೋರ್ಸ್ ಮಾಡಿದ್ದ.

Leave a Reply

Your email address will not be published. Required fields are marked *

error: Content is protected !!