ವಿಟ್ಲ: ಮರಳು ಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ವಿಟ್ಲ: ಪ್ರಕರಣಯೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಪೆರುವಾಯಿ ಗ್ರಾಮದ ಕಿನಿಯರಪಾಲು ನಿವಾಸಿ ಸುಧೀರ್ ಕುಮಾರ್(34) ಬಂಧಿತ ಆರೋಪಿ.
ಮರಳು ಕಳ್ಳತನದಲ್ಲಿ ತಲೆಮರೆಸಿಕೊಂಡಿದ್ದ ಈತನ ಮೇಲೆ ವಾರಂಟ್ ಹೊರಡಿಸಿದ್ದು ಸದ್ರಿ ವಾರಂಟ್ ಆಸಾಮಿ ವಿಳಾಸದಲ್ಲಿ ಗೈರು ಹಾಜರಿದ್ದು ತಲೆಮರೆಸಿ ಕೊಂಡಿದ್ದು, ವಿಟ್ಲ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಮಾರ್ಗದರ್ಶನದಲ್ಲಿ ಎಸೈಗಳಾದ ಕಾರ್ತಿಕ್ ಮತ್ತು ವಿದ್ಯಾ ಕೆ, ಸಿಬ್ಬಂದಿಗಳು ಅಡ್ಯನಡ್ಕ ಎಂಬಲ್ಲಿ ಬಂಧಿಸಿದ್ದಾರೆ.






