December 19, 2025

ಬೈಂದೂರು: ಬೃಹತ್ ಅಲೆಗೆ ದೋಣಿ ಸಿಲುಕಿ ಪಲ್ಟಿ: 9 ಮೀನುಗಾರರ ರಕ್ಷಣೆ

0
hr-040823-fish1.jpg

ಬೈಂದೂರು: ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿಯೊಂದು ಬೃಹತ್ ಅಲೆಗೆ ದೋಣಿ ಸಿಲುಕಿ ಪಲ್ಟಿಯಾದ ಘಟನೆ ಕೊಡೇರಿ ಕಡಲ ತೀರದಲ್ಲಿ ಶುಕ್ರವಾರ ಸಂಭವಿಸಿದೆ.

ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಪಾಳ್ಯದರತೋಪ್ಲು ಪುರ್ಶುಯ್ಯನ ಪುಂಡಲಿಕ ಎನ್ನುವರ ಮಾಲಿಕತ್ವದ ಶ್ರೀ ದುರ್ಗಾಪರಮೇಶ್ವರಿ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಬೃಹತ್ ಅಲೆಗೆ ದೋಣಿ ಸಿಲುಕಿ ಪಲ್ಟಿಯಾಗಿದೆ.

ಇನ್ನು ಕೊಡೇರಿ ಸಮುದ್ರ ತೀರದ ಸುಮಾರು 5 ನಾಟಿಕಲ್ ದೂರದಲ್ಲಿ ಅಲೆಗಳ ಹೊಡೆತಕ್ಕೆ ದೋಣಿ ಸಿಲುಕಿ ಪಲ್ಟಿಯಾಗಿದ್ದು, ತಕ್ಷಣ ಇತರೆ ದೋಣಿಗಳ ಸಹಾಯದಿಂದ 9 ಮಂದಿ ಮೀನುಗಾರನ್ನು ರಕ್ಷಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!