December 19, 2025

ನಂದಾವರನಿಗಮ ಫ್ರೆಂಡ್ಸ್  ಮತ್ತು ನಂದಾವರ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ವತಿಯಿಂದ  “ನಮ್ಮ ನಡೆ ಡ್ರಗ್ಸ್ ಮುಕ್ತ ನಂದಾವರ ಕಡೆಗೆ” ಅಭಿಯಾನ

0
IMG-20230802-WA0100

ಬಂಟ್ವಾಳ : ನಂದಾವರ ನಿಗಮ ಫ್ರೆಂಡ್ಸ್  ಮತ್ತು ನಂದಾವರ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಇದರ ಆಶ್ರಯದಲ್ಲಿ “ನಮ್ಮ ನಡೆ ಡ್ರಗ್ಸ್ ಮುಕ್ತ ನಂದಾವರ ಕಡೆಗೆ” ಎಂಬ ಘೋಷಣೆಯೊಂದಿಗೆ ಅಭಿಯಾನ ಕಾರ್ಯಕ್ರಮವು ನಂದಾವರ ಕೇಂದ್ರ ಜುಮಾ ಮಸೀದಿ ಸಮುದಾಯ ಭವನದಲ್ಲಿ ನಡೆಯಿತು.

  ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ಉದ್ಘಾಟಿಸಿದರು. ನಂದಾವರ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.

       ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಪೊಲೀಸ್ ಉಪ ವರಿಷ್ಠಾಧಿಕಾರಿ ಪ್ರತಾಪ್ ಸಿಂಗ್ ಥೋರಾಟ್ ಮಾತನಾಡಿ ಮಾದಕ ವ್ಯಸನಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.

     ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಕೆ.ಎಂ.ಇಕ್ಬಾಲ್ ಬಾಳಿಲ ಮುಖ್ಯ ಬಾಷಣಗೈದರು.

ಬಂಟ್ವಾಳ ಪೊಲೀಸ್ ನಿರೀಕ್ಷಕ ವಿವೇಕಾನಂದ, ಬಂಟ್ವಾಳ ಪೊಲೀಸ್ ಉಪ ನಿರೀಕ್ಷಕ ರಾಮಕೃಷ್ಣ, ಅಪರಾಧ ವಿಭಾಗದ ಉಪ ನಿರೀಕ್ಷಕ ಕಲೈಮಾರ್, ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ ಮಾತನಾಡಿದರು.

   ನಂದಾವರ ನಿಗಮ ಫ್ರೆಂಡ್ಸ್ ಅಧ್ಯಕ್ಷ ಇದಿನಬ್ಬ ನಂದಾವರ, ನಂದಾವರ ಮಸೀದಿ ಉಪಾಧ್ಯಕ್ಷ ಎನ್.ಅಬ್ದುಲ್ ಬಶೀರ್, ಸಜಿಪ ಮುನ್ನೂರು ಗ್ರಾ.ಪಂ.ಅದ್ಯಕ್ಷೆ ಸಬೀನಾ ಹಮೀದ್, ದಾಸರಗುಡ್ಡೆ ಬದ್ರಿಯಾ ಜುಮಾ ಮಸೀದಿ ಖತೀಬ್ ನಾಸಿರ್ ಫೈಝಿ, ಅಧ್ಯಕ್ಷ ಅಬ್ದುಲ್ ಲತೀಫ್, ನಂದಾವರ ಸಲಫಿ ಮಸೀದಿ ಖತೀಬ್ ನೌಷಾದ್, ಅಧ್ಯಕ್ಷ ಎಸ್.ಕೆ.ಅಬ್ದುಲ್ ರಝಾಕ್, ನಂದಾವರ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶ್ರೀಕಾಂತ ಎಂ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಲತಾ, ಎಸ್ಸೆಸ್ಸೆಫ್ ನಂದಾವರ ಶಾಖಾದ್ಯಕ್ಷ ಸರ್ವಾನ್ ನಂದಾವರ, ಎಸ್ಕೆಎಸ್ಸೆಸ್ಸೆಫ್ ನಂದಾವರ ಶಾಖಾದ್ಯಕ್ಷ ಫಾರೂಕ್ ನಂದಾವರ, ಮಾಜಿ ಅಧ್ಯಕ್ಷರುಗಳಾದ ಮುಹಮ್ಮದ್ ಆರಿಫ್, ಮುಹಮ್ಮದ್ ಶರೀಫ್ ಮಲ್ಪೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ಅಕ್ಬರ್ ಅಲಿ ನಂದಾವರ ಸ್ವಾಗತಿಸಿ, ವಂದಿಸಿದರು. ಮಾಲಿಕ್ ಅನ್ಸಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!