ಅಮರನಾಥ ಯಾತ್ರೆಗೆ ಮುಗಿಸಿ ಬರುತ್ತಿದ್ದಾಗ ಅಪಘಾತ: 6 ಮಂದಿ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
ಮಹಾರಾಷ್ಟ್ರ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಎನ್‌ಎಚ್ 6 ರಲ್ಲಿ ಶನಿವಾರ ಬೆಳಿಗ್ಗೆ ಎರಡು ಬಸ್‌ಗಳು ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ವರದಿಯಾಗಿದೆ.
ಜಿಲ್ಲೆಯ ಮಲ್ಕಾಪುರ ಪಟ್ಟಣದ ಮೇಲ್ಸೇತುವೆಯಲ್ಲಿ ಮುಂಜಾನೆ ಶನಿವಾರ ಮುಂಜಾನೆ 2.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
“ಅಮರನಾಥ ಯಾತ್ರೆಗೆ ಮುಗಿಸಿ ವಾಪಸು ಬರುತ್ತಿದ್ದ ಒಂದು ಬಸ್, ನಾಸಿಕ್ ಕಡೆಗೆ ಹೋಗುತ್ತಿದ್ದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.




