September 20, 2024

ಮೊಹರಂ ಮೆರವಣಿಗೆ ವೇಳೆ ಹೈ ಟೆನ್ಷನ್‌ ವಿದ್ಯುತ್‌ ತಂತಿ ಸ್ಪರ್ಶ: ನಾಲ್ವರು ಮೃತ್ಯು

0

ಜಾರ್ಖಂಡ್‌: ಮೊಹರಂ ಹಬ್ಬದ ಮೆರವಣಿಗೆ ವೇಳೆ ಹೈ ಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ನಾಲ್ವರು ಮೃತಪಟ್ಟಿದ್ದಾರೆ 10 ಮಂದಿ ಗಾಯಗೊಂಡ ಘಟನೆ ಬೊಕಾರೊ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಖೆಟ್ಕೊ ಎನ್ನುವ ಗ್ರಾಮದಲ್ಲಿ ಮೆರವಣಿಗೆ ವೇಳೆ ಕಬ್ಬಿಣದಿಂದ ಮಾಡಿದ ಧಾರ್ಮಿಕ ಧ್ವಜವು 11 ಸಾವಿರ ವೋಲ್ಟ್‌ನ ವಿದ್ಯುತ್‌ ತಂತಿಗೆ ತಾಗಿದ ಕಾರಣ ದುರ್ಘಟನೆ ಸಂಭವಿಸಿದೆ ಎಂದು ಬೊಕಾರೊಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯದರ್ಶಿ ಅಲೋಕ್ ಹೇಳಿದ್ದಾರೆ.

ಶನಿವಾರ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ. ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!