Onlineನಲ್ಲಿ ಸ್ಪೀಕರ್ ಬುಕ್ ಮಾಡಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ಯೋಧ
ಬೆಂಗಳೂರು: ನಿವೃತ್ತ ಯೋಧರೊಬ್ಬರಿಂದ ಹಂತ ಹಂತವಾಗಿ 1 ಲಕ್ಷ ರೂ. ಹಣ ಹಾಕಿಸಿಕೊಂಡು ಯಾಮಾರಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಮಹೇಶ್ ವಂಚನೆಗೊಳಗಾದ ನಿವೃತ್ತ ಯೋಧ. ಮೋಸ ಮಾಡಲೆಂದೇ ವಂಚಕ MOSA1122@SBI ಯುಪಿಐ ಐಡಿ ಮಾಡಿದ್ದ. ಫೋನ್ ಮಾಡಿ ಅಕೌಂಟ್ ಚೆಕ್ ಮಾಡು ಅಂತ ಹೇಳಿದ್ದ. ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡ್ತಿದ್ದಂತೆ ಹಣ ಮಂಗಮಾಯವಾಗಿದೆ.
ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೇ ಪದೆ ಅಕೌಂಟ್ ಪರೀಕ್ಷಿಸಲು ಹೇಳುತ್ತಿದ್ದ. ಹಂತ ಹಂತವಾಗಿ 1 ಲಕ್ಷ ರೂ. ಹಣ ಅಕೌಂಟ್‌ನಿಂದ ಮಾಯವಾಗಿದೆ. ನಿವೃತ್ತ ಯೋಧ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




