IPhone ಖರೀದಿಸಲು ಹೆತ್ತ ಮಗುವನ್ನೇ ಮಾರಾಟ ಮಾಡಿದ ದಂಪತಿ
ಪಶ್ಚಿಮ ಬಂಗಾಳ: ಮನೆಯ ಏನಾದರು ಅಗತ್ಯ ವಿಚಾರಕ್ಕೆ ದುಡ್ಡಿನ ಸಮಸ್ಯೆ ತಲೆದೂರಿದರೆ ಬ್ಯಾಂಕ್ ನಿಂದ ಸಾಲ ಪಡೆಯುತ್ತೇವೆ ಅಥವಾ ನಮ್ಮ ಗೆಳೆಯರ ಸಮ್ಮುಖದಲ್ಲಿ ಹಣಕಾಸಿನ ವ್ಯವಹಾರ ನಡೆಸುತ್ತೇವೆ ಆದರೆ ಇಲ್ಲೊಂದು ದಂಪತಿ ಐಫೋನ್ ಖರೀದಿಸಲು ಹೆತ್ತ ಮಗುವನ್ನೇ ಮಾರಾಟ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು ಇಲ್ಲಿ ದಂಪತಿಗಳು ತಮ್ಮ ಮಗುವನ್ನು ಐಫೋನ್ ಖರೀದಿಸಲು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಅವರು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡಲು ಐಫೋನ್ ಖರೀದಿಸಲು ಬಯಸಿದ್ದರು ಎನ್ನಲಾಗಿದೆ ಫೋನ್ ಖರೀದಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ ಹೀಗಾಗಿ ತಮ್ಮ ಮಗುವನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ ಅಲ್ಲದೆ ಮಗುವನ್ನು ಮಾರಾಟ ಕೂಡ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿ ಸತಿ ಹಾಗೂ ಮಗುವನ್ನು ಖರೀದಿಸಿದ ಮಹಿಳೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು ಮಗುವಿನ ತಂದೆ ಜೈದೇವ್ ಇನ್ನೂ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗೆ ಬಲೆ ಬಿಸಿದ್ದಾರೆ.





