August 12, 2026

ಮಂಗಳೂರು: ಬಳ್ಕುಂಜೆ ಹಾಲು ಉತ್ಪಾದಕರ ಮಹಿಳಾ ಸಂಘದ ಕಚೇರಿಯಿಂದ ಕಳವು

0
image_editor_output_image2127618502-1690176116858.jpg

ಮಂಳೂರು: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಹಾಲು ಉತ್ಪಾದಕರ ಮಹಿಳಾ ಸಂಘದಿಂದ ಕಂಪ್ಯೂಟರ್ ಕಳವು ಆಗಿದ್ದು, ಪ್ರಕರಣ ದಾಖಲಾಗಿದೆ.

ಹಾಲು ಉತ್ಪಾದಕರ ಸಂಘದ ಹಿಂಭಾಗದ ಕಿಟಕಿಯ ಕಬ್ಬಿಣದ ಸರಳು ತುಂಡರಿಸಿ ಒಳಭಾಗಕ್ಕೆ ಬಂದ ಕಳ್ಳರು ಕ್ಯಾಷ್ ಡ್ರಾವರ್ ನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಬಳಿಕ ಡ್ರಾವರ್ ಮೇಲಿದ್ದ ಕಂಪ್ಯೂಟರ್ ಕಳ್ಳತನ ಮಾಡಿದ್ದಾರೆ.

ಮುಂಭಾಗದ ಬಾಗಿಲಿನ ಬದಿಯಲ್ಲಿ ಕಬ್ಬಿಣದ ಸೆಟರ್ ಹಾಕಿರುವ ಸಣ್ಣ ಕಿಟಿಕಿಯ ಒಳ ಭಾಗದ ಚಿಲಕ ತೆಗೆದು ಪರಾರಿಯಾಗಿದ್ದಾರೆ.

ಇದು ಎರಡನೇ ಬಾರಿ ಹಾಲಿನ ಸೊಸೈಟಿಯಲ್ಲಿ ಕಳ್ಳತನ ನಡೆದಿದೆ, ಕಳೆದ ವರ್ಷ ಸುಮಾರು ನಾಲ್ಕು ಸಾವಿರದಷ್ಟು ಹಣವನ್ನು ಇದೇ ಮಾದರಿಯಲ್ಲಿ ಕಳ್ಳತನ ಮಾಡಲಾಗಿತ್ತು ಎಂದು ಸೊಸೈಟಿ ಕಾರ್ಯದರ್ಶಿ ವನಿತಾ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!