August 12, 2026

ಸುಳ್ಯ: ಕ್ಷುಲ್ಲಕ ಕಾರಣಕ್ಕೆ ಬೀದಿಯಲ್ಲಿ ತಲವಾರು ಹಿಡಿದು ಹಲ್ಲೆಗೆ ಯತ್ನ: ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು

0
IMG-20230722-WA0043.jpg

ಸುಳ್ಯ:ಕ್ಷುಲ್ಲಕ ಕಾರಣಕ್ಕೆ ತಲವಾರು ಹಿಡಿದು ಹಲ್ಲೆಗೆ ಯತ್ನಿಸಿದ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ನಡೆದಿದೆ.

ಶ್ರೀ ಪಂಚಲಿಂಗೇಶ್ವರ ಪೆಟ್ರೋಲ್ ಪಂಪ್ ಬಳಿ ಇರುವ ನಿಸರ್ಗ ಕಾಂಪ್ಲೆಕ್ಸ್ ನಲ್ಲಿ ವಾಸ್ತವ್ಯವಿರುವ ಪ್ರವೀಣ ಎಂಬವರು ಇನ್ನೊರ್ವ ನಿವಾಸಿ ಧರ್ಮಲಿಂಗಂ ಎಂಬವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ತಮ್ಮ ವಾಹನದಿಂದ ತಲವಾರು ತೆಗೆದು ಹಲ್ಲೆ ನಡೆಸಲು ಮುಂದಾಗಿದ್ದಾಗಿ‌ ವರದಿಯಾಗಿದೆ.

ಘಟನೆ ಸಂದರ್ಭದಲ್ಲಿ ಅಲ್ಲಿಯ ಸ್ಥಳೀಯರು ತಡೆದಿದ್ದಾರೆ. ಈ ಬಗ್ಗೆ ಧರ್ಮಲಿಂಗಂ ರವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕೇಸು ದಾಖಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!