September 20, 2024

ವಿಟ್ಲ: ಗಾಳಿ ಮಳೆಗೆ ರಸ್ತೆಗಡ್ಡವಾಗಿ ಬಿದ್ದ ಮರ:
ಮಾಣಿ – ಕಬಕ ಹೆದ್ದಾರಿ ಬಂದ್

0

ವಿಟ್ಲ: ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಳಕಟ್ಟೆ ಬಳಿ ಮರವೊಂದು ರಸ್ತೆಗಡ್ಡವಾಗಿ ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ.

ಗಾಳಿ ಮಳೆಗೆ ಮರದ ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಘಟನೆಯಿಂದಾಗಿ
ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಲು ಸಾಲುಗಟ್ಟಿ ನಿಂತಿದೆ. ಕೆಲವೊಂದು ವಾಹನಗಳು ಕೊಡಾಜೆ ವೀರಕಂಬ ಮೂಲಕ ಕಲ್ಲಡ್ಕ ತಲುಪಿ ಸಂಚಾರ ನಡೆಸಿದರೆ ಕೆಲವೊಂದು ವಾಹನಗಳು ಕಬಕ ವಿಟ್ಲ ಮೂಲಕ ಕಲ್ಲಡ್ಕ ತಲುಪಿ ಸಂಚಾರ ನಡೆಸಿವೆ.

ವಿದ್ಯುತ್ ಇಲಾಖೆ, ಅರಣ್ಯ ಇಲಾಖೆ, ವಿಟ್ಲ ಠಾಣಾ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಸೇರಿಕೊಂಡು ತೆರವು ಕಾರ್ಯಾಚರಣೆ ನಡೆಸುತ್ತಿದೆ‌.

Leave a Reply

Your email address will not be published. Required fields are marked *

error: Content is protected !!