March 13, 2026

ವಿಶ್ವ ಜಾಂಬೂರಿಗೆ ತೆರಳುವ ಬಿ.ಎಂ.ತುಂಬೆ ಅವರಿಗೆ ಬಂಟ್ವಾಳ ಜಮೀಯತ್ತುಲ್ ಫಲಾಹ್ ನಿಂದ ಬೀಳ್ಕೊಡುಗೆ

0
IMG-20230721-WA0009.jpg

ದಕ್ಷಿಣ ಕೊರಿಯಾದ ಸೀಮನ್ ಗಾಮ್ ನಲ್ಲಿ 15 ದಿವಸದ ಕಾಲ ನಡೆಯುವ ಸ್ಕೌಟ್ ಮತ್ತು ಗೈಡ್ಸ್ 25ನೇ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಲು ಭಾರತದ ಪ್ರತಿನಿಧಿಯಾಗಿ ತೆರಳುತ್ತಿರುವ ನಿವೃತ್ತ ಶಿಕ್ಷಕರೂ, ಬಂಟ್ವಾಳ ಜಮೀಯತ್ತುಲ್ ಫಲಾಹ್ ನ ಪೂರ್ವಾಧ್ಯಕ್ಷರೂ ಆಗಿರುವ ಬಿ. ಮೊಹಮ್ಮದ್ ತುಂಬೆ ಅವರನ್ನು ಸನ್ಮಾನಿಸಲಾಯಿತು.

ಶುಕ್ರವಾರ (21/07) ಮೆಲ್ಕಾರ್ ಎಂ.ಎಚ್. ಕಂಪೌಂಡ್ ನಲ್ಲಿ ನಡೆದ ಬಂಟ್ವಾಳ ಜಮೀಯತುಲ್ ಫಲಾಹ್ ಸಭೆ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಸಭಾಧ್ಯಕ್ಷತೆ ವಹಿಸಿದ ಘಟಕದ ಅಧ್ಯಕ್ಷ ರಶೀದ್ ವಿಟ್ಲ ಅವರು ಬಿ. ಮೊಹಮ್ಮದ್ ತುಂಬೆ ಅವರನ್ನು ಸನ್ಮಾನಿಸಿದರು.

ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಅವರು ಅಭಿನಂದನಾ ಮಾತುಗಳನ್ನಾಡಿದರು. ಜಮೀಯತ್ತುಲ್ ಫಲಾಹ್ ಜಿಲ್ಲಾ ಕೇಂದ್ರ ಸಮಿತಿಯ ಪೂರ್ವಾಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಘಟಕದ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಘಟಕದ ಪೂರ್ವಾಧ್ಯಕ್ಷರಾದ ರಫೀಕ್ ಹಾಜಿ ಆಲಡ್ಕ, ಅಬೂಬಕರ್ ನೋಟರಿ, ಸುಲೈಮಾನ್ ಸೂರಿಕುಮೇರು, ಪಿ. ಮಹಮ್ಮದ್, ಆಸಿಫ್ ಇಕ್ಬಾಲ್, ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ, ಅಬ್ಬಾಸ್ ಅಲಿ ಬೋಳಂತೂರು, ಮಹಮ್ಮದ್ ನಾರಂಕೋಡಿ, ಅಹ್ಮದ್ ಮುಸ್ತಫಾ ಗೋಳ್ತಮಜಲು ಈ ಸಂದರ್ಭ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ಸ್ವಾಗತಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!