ಮಾನಸಿಕ ಅಸ್ವಸ್ಥನಾಗಿದ್ದ ಮಗನ ಕೊಲೆ: ತಂದೆಯ ಬಂಧನ
ಬೆಳಗಾವಿ: ಕಳೆದ ಮೇ 31ರಂದು ಪಟ್ಟಣದ ಹೊರವಲಯದ ಮಲಪ್ರಭಾ ನದಿತೀರದಲ್ಲಿ ಪತ್ತೆಯಾದ ಅಪರಿಚಿತ ಯುವಕನ ಅಸಹಜ ಸಾವಿನ ಪ್ರಕರಣವನ್ನು ಬೇಧಿಸಿರುವ ಖಾನಾಪುರ ಪೊಲೀಸರು ಪ್ರಕರಣದ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.
ಮಾನಸಿಕವಾಗಿ ಅಸ್ವಸ್ಥನಾಗಿದ್ದ ತನ್ನ ಹಿರಿಯ ಮಗ ಬದುಕಿರುವವರೆಗೆ ಕಿರಿಯ ಮಗನ ಮದುವೆಗೆ ಅಡಚಣೆಯಾಗುತ್ತದೆ ಎಂದು ಭಾವಿಸಿ ತಂದೆಯೇ ತನ್ನ ಹಿರಿಯ ಮಗನಿಗೆ ವಿಷವುಣಿಸಿ ಕೊಲೆಗೈದಿರುವುದಾಗಿ ಪೊಲೀಸರ ತನಿಖೆಯಲ್ಲಿ ಧೃಡಪಟ್ಟಿದೆ.
ಬಂಧಿತ ತಂದೆಯನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.




