March 24, 2026

ಕಟಪಾಡಿ | ಟ್ಯಾಕ್ಟರ್‌ಗೆ ಮಿನಿ ಟೆಂಪೋ ಢಿಕ್ಕಿ: ಚಾಲಕ ಸಹಿತ ನಾಲ್ಕು ಮಂದಿಗೆ ಗಾಯ

0
image_editor_output_image-1471708080-1689757631015.jpg

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯ ಹೊಟೇಲೊಂದರ ಬಳಿ ಹೆದ್ದಾರಿಯಲ್ಲಿ ಗಿಡಗಳ ಆರೈಕೆ ಮಾಡುತ್ತಿದ್ದ ಕಾರ್ಮಿಕರು ಮತ್ತು ಟ್ಯಾಕ್ಟರ್‌ಗೆ ಮಿನಿ ಟೆಂಪೋ ಢಿಕ್ಕಿ ಹೊಡೆದು ಟೆಂಪೋ ಚಾಲಕ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಶಿಲ್ಪಾ (35), ಮಲ್ಲಪ್ಪ (42) ಮತ್ತು ರೇಣುಕಾ (34) ಮತ್ತು ಟೆಂಪೋ ಚಾಲಕ ಚರಣ್ ರಾಜ್ ಗಾಯಗೊಂಡಿದ್ದು, ಗಾಯಾಳುಗಳ ಪೈಕಿ ಶಿಲ್ಪಾ ಹಾಗೂ ಚಾಲಕನಿಗೆ ಗಂಭೀರ ಗಾಯಗಳಾಗಿವೆ.

Leave a Reply

Your email address will not be published. Required fields are marked *

error: Content is protected !!