February 4, 2026

ಪೋಸ್ಟಿಂಗ್‌ ಆಗಿ ಮೊದಲ ದಿನವೇ ಲಂಚಕ್ಕೆ ಆಮಿಷ: ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ

0
image_editor_output_image-1141682525-1689667626259.jpg

ರಾಂಚಿ : ಜಾರ್ಖಂಡ್‌ ರಾಜ್ಯದಲ್ಲಿ ಜೆಪಿಎಸ್‌ಸಿ ಪರೀಕ್ಷೆಯ್ಲಿ 108ನೇ ಶ್ರೇಯಾಂಕ ಪಡೆದು ಒಂದು ವಾರದ ಹಿಂದೆಯಷ್ಟೇ ಮೊದಲ ಪೋಸ್ಟಿಂಗ್‌ ಪಡೆದುಕೊಂಡಿದ್ದ ಮಿಥಾಲಿ ಶರ್ಮ, ಮೊದಲ ದಿನವೇ ತನ್ನ ಮೊದಲ ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಜಾರ್ಖಂಡ್‌ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೋ-ಆಪರೇಟಿವ್‌ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟ್ರಾರ್‌ ಹುದ್ದೆಯಲ್ಲಿದ್ದ ಮಿಥಾಲಿ ಶರ್ಮರನ್ನು ಬಂಧಿಸಿದೆ.

10 ಸಾವಿರ ಲಂಚ ಪಡೆಯುವಾಗ ಈಕೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಮಿಥಾಲಿ ಶರ್ಮ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರಾಮೇಶ್ವರ ಪ್ರಸಾದ್‌ ಯಾದವ್‌ ಎನ್ನುವ ವ್ಯಕ್ತಿಯಿಂದ ದೂರು ದಾಖಲಾದ ಬೆನ್ನಲ್ಲಿಯೇ ಎಸಿಬಿ ಕಾರ್ಯಪ್ರವೃತ್ತವಾಗಿ ಮಿಥಾಲಿ ಶರ್ಮಳನ್ನು ಬಂಧಿಸಿದೆ.

ತನ್ನ ದೂರಿನಲ್ಲಿ, ಯಾದವ್ ಅವರು ಕೊಡೆರ್ಮಾ ವ್ಯಾಪಾರ್ ಮಂಡಲ್ ಸಹೋಗ್ ಸಮಿತಿ ಲಿಮಿಟೆಡ್‌ನ ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದಾರೆ.

ಕೊಡೆರ್ಮ ವ್ಯಾಪಾರ ಮಂಡಲವು ಬೀಜ ವಿತರಣೆಯ ನೋಡಲ್ ಏಜೆನ್ಸಿಯಾಗಿದೆ. ಜೂನ್ 16 ರಂದು ಮಿಥಾಲಿ ಶರ್ಮ ಅವರು ಕಚೇರಿಯ ಪರಿಶೀಲನೆಗೆ ಆಗಮಿಸಿದರು.

Leave a Reply

Your email address will not be published. Required fields are marked *

error: Content is protected !!