ಹಳಿ ದಾಟುವಾಗ ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಹೊಸಪೇಟೆ: ರೈಲ್ವೇ ಹಳಿ ದಾಟುವಾಗ ರೈಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜು. 18 ಮಂಗಳವಾರ ನಡೆದಿದೆ.
ನಗರದ ಚಿತ್ತವಾಡ್ಗಿ ರೈಲ್ವೇ ಗೇಟ್ ಬಳಿ ಘಟನೆ ನಡೆದಿದ್ದು, ಜಾಫರ್ ಹುಸೇನ್ ಸಾಧಿಕ್( 23) ಮೃತ ವ್ಯಕ್ತಿ.
ರೈಲ್ವೇ ಪೊಲೀಸರು ಹಾಗೂ ಚಿತ್ತವಾಡ್ಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




