September 20, 2024

ಮಂಗಳೂರು: ಲೈಂಗಿಕ ಕಿರುಕುಳ ಪ್ರಕರಣ: ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0

ಮಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಅಡ್ಯಾರ್ ಕಣ್ಣೂರಿನ ಕರ್ಮಾರ್ ನಿವಾಸಿ ಹಸೈನ್(35) ಬಂಧಿತ ಆರೋಪಿ.

2012ರಲ್ಲಿ ಯುವತಿಯೊಬ್ಬಳು ಅಂಗಡಿಯ ಸಾಮಾನುಗಳನ್ನು ಖರೀದಿಸಿ ಲೇಡಿಹಿಲ್ ಸಮೀಪ ಫ್ಲ್ಯಾಟ್ ಕಡೆಗೆ ಹೋಗುತ್ತಿದ್ದಾಗ ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಈ ಬಗ್ಗೆ ಯುವತಿ ಉರ್ವ ಠಾಣೆಗೆ ಯುವತಿ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇನ್ನು 2014ರ ಅ.18ರಂದು ಈತನಿಗೆ 4 ತಿಂಗಳ ಕಾರಾಗೃಹ ಶಿಕ್ಷೆ ತೀರ್ಪು ಪ್ರಕಟವಾಗಿತ್ತು. ಆದರೆ ಆರೋಪಿಯು ತಲೆಮರೆಸಿಕೊಂಡಿದ್ದ.

Leave a Reply

Your email address will not be published. Required fields are marked *

error: Content is protected !!